ಬಿಲ್ಲಿಮೋಗ ಪುಟ್ಟಸ್ವಾಮಿ ಗೋವಿಂದ, ಬಿ. ಪಿ. ಗೋವಿಂದ (ಜನನ ಮಾರ್ಚ್ ೪, ೧೯೫೧) ಭಾರತೀಯ ವೃತ್ತಿಪರ ಕ್ಷೇತ್ರ ಹಾಕಿ ಆಟಗಾರ ಮತ್ತು ಭಾರತೀಯ ತಂಡದ ಮಾಜಿ ನಾಯಕರಾಗಿದ್ದರು. == ವೃತ್ತಿಜೀವನ == ಗೋವಿಂದರು ಅವರನ್ನು ೭೦ ದಶಕದ ಅತಿವೇಗದ ಹಾಕಿ ಆಟಗಾರರಲ್ಲಿ ಒಬ್ಬನೆಂದು ಪರಿಗಣಿಸಲಾಗಿತ್ತು. ಗೋವಿಂದ ಪೆನಾಲ್ಟಿ ಶೂಟಿಂಗ್ ಸಾಮರ್ಥ್ಯಕ್ಕಾಗಿ ಹೆಸರುವಾಸಿಯಾಗಿದ್ದರು. ೧೯೭೦, ೧೯೭೪ ಮತ್ತು ೧೯೭೮ ರ ಅವಧಿಯಲ್ಲಿ ಏಷ್ಯನ್ ಕ್ರೀಡಾಕೂಟಗಳಲ್ಲಿ ಅವರು ಭಾರತಕ್ಕಾಗಿ ಆಡಿದರು: ಭಾರತವು ಎಲ್ಲ ಮೂರು ಪಂದ್ಯಗಳಲ್ಲಿ ಎರಡನೆಯ ಸ್ಥಾನ ಗಳಿಸಿತು. ೧೯೭೨ ರಲ್ಲಿ ಮ್ಯೂನಿಚ್ ಬೇಸಿಗೆಯ ಒಲಂಪಿಕ್ಸ್, ೧೯೭೩ ರಲ್ಲಿ ಆಮ್ಸ್‍ಟರ್‍ಡ್ಯಾಂ ವಿಶ್ವಕಪ್ ,ಮತ್ತು ೧೯೭೫ ರಲ್ಲಿ ಕೌಲಾಲಂಪುರ್ ವಿಶ್ವಕಪ್, ಫೈನಲ್ಸ್ ನಲ್ಲಿ ಪಾಕಿಸ್ತಾನವನ್ನು ೨-೧ ಗೋಲುಗಳಿಂದ ಸೋಲಿಸಿತು. ೧೯೭೬ ರಲ್ಲಿ ಮಾಂಟ್ರಿಯಲ್ ಒಲಿಂಪಿಕ್ಸ್ ೧೯೭೨ರಲ್ಲಿ ವಿಶ್ವ ತಂಡಕ್ಕಾಗಿ ಆಯ್ಕೆ == ಪ್ರಶಸ್ತಿ == ಭಾರತೀಯ ಹಾಕಿಗೆ ನೀಡಿದ ಕೊಡುಗೆಗಾಗಿ ಅವರಿಗೆ ಅರ್ಜುನ ಪ್ರಶಸ್ತಿ ನೀಡಲಾಯಿತು. == ಆಯ್ಕೆ ಸಮಿತಿ == ನಂತರ ಅವರು ರಾಷ್ಟ್ರೀಯ ಹಾಕಿ ತಂಡದ ಆಯ್ಕೆಗಾರನ ಪಾತ್ರವನ್ನು ವಹಿಸಿಕೊಂಡರು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == . . 2007-10-27 ವೇಬ್ಯಾಕ್ ಮೆಷಿನ್ ನಲ್ಲಿ. [೧] [೨] 2007-10-27 ವೇಬ್ಯಾಕ್ ಮೆಷಿನ್ ನಲ್ಲಿ.